X Close
X

ಐಪಿಎಲ್ 2019: ಆರ್ ಸಿಬಿಗೆ ಮೇಜರ್ ಅಲ್ಲ, ಭರ್ಜರಿ ಸರ್ಜರಿ.. ಕೊಹ್ಲಿ ನಾಯಕತ್ವಕ್ಕೇ ಬಂತು ಕುತ್ತು!


kohli-ABD
ಬೆಂಗಳೂರು: 2019ರ ಐಪಿಎಲ್ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಂಡದಲ್ಲಿ ಭರ್ಜರಿ ಬದಲಾವಣೆ ತರಲು ಮುಂದಾಗಿದೆ.

ಈಗಾಗಲೇ ತಂಡದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದ್ದು, ಈ ಹಿಂದಿನ ಕೋಚ್ ಡೇನಿಯಲ್ ವೆಟೋರಿ ಅವರನ್ನು ಕೈ ಬಿಟ್ಟು ಅವರ ಸ್ಥಾನಕ್ಕೆ ಗ್ಯಾರಿ ಕರ್ಸ್ಟರ್ನ್ ಮತ್ತು ಬೌಲಿಂಗ್ ಕೋಚ್ ಆಗಿ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಅವರನ್ನು ನೇಮಕ ಮಾಡಲಾಗಿದೆ. ಅಂತೆಯೇ ಕೋಚಿಂಗ್ ಸಿಬ್ಬಂದಿಗಳನ್ನೂ ಕೂಡ ಬದಲಾವಣೆ ಮಾಡಲಾಗಿದೆ. ಇದೀಗ ಇವೆಲ್ಲವನ್ನೂ ಮೀರಿದ ಭರ್ಜರಿ ಸರ್ಜರಿಗೆ ಆರ್ ಸಿಬಿ ಫ್ರಾಂಚೈಸಿಗಳು ಮುಂದಾಗಿದ್ದು, ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನೇ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಸುವ ಕುರಿತು ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಆರ್ ಸಿಬಿ ತಂಡದ ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಅವರಿಗೆ ಬ್ಯಾಟಿಂಗ್ ಜೊತೆಗೆ ನಾಯಕತ್ವದ ಜವಾಬ್ದಾರಿ ಕೂಡ ಹೊರೆಯಾಗುತ್ತಿದ್ದು, ಇದೇ ಕಾರಣಕ್ಕೆ ಅವರಿಂದ ನಾಯಕತ್ವ ಜವಾಬ್ದಾರಿಯನ್ನು ಹಿಂಪಡೆಯಲು ಚರ್ಚೆ ನಡೆಸಲಾಗುತ್ತಿದೆ. ಅಂತೆಯೇ ಆರ್ ಸಿಬಿ ನಾಯಕ ಸ್ಥಾನಕ್ಕೆ ಇತ್ತೀಚೆಗೆ ನಿವೃತ್ತಿಯಾದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಡಿವಿಲಿಯರ್ಸ್ ಗೇ ನಾಯಕತ್ವ ನೀಡಲು ಆರ್ ಸಿಬಿ ಪ್ರಾಂಚೈಸಿಗಳು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಲಾಗಿದೆ.

2008ರಿಂದಲೂ ಆರ್’ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ 2013ರಲ್ಲಿ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ಕೊಹ್ಲಿ ನೇತೃತ್ವದಲ್ಲಿ ಇದುವರೆಗೆ ಆರ್’ಸಿಬಿ ಒಮ್ಮೆಯೂ ಕಪ್ ಎತ್ತಿಹಿಡಿಯಲು ಸಫಲವಾಗಿಲ್ಲ. ಕಳೆದ ಎರಡು ಆವೃತ್ತಿಗಳಲ್ಲಂತೂ ಹೀನಾಯ ಪ್ರದರ್ಶನ ನೀಡಿದೆ. ಇದುವರೆಗೂ ಐಪಿಎಲ್‌ನಲ್ಲಿ ಆರ್‌ಸಿಬಿ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಇದರಿಂದಾಗಿ ಕೊಹ್ಲಿ, ನಾಯಕತ್ವದ ಕುರಿತು ಪ್ರಶ್ನೆಗಳು ಎಂದಿದ್ದವು. ಈ ಹಿನ್ನೆಲೆಯಲ್ಲಿ ಡಿವಿಲಿಯರ್ಸ್‌ಗೆ ನಾಯಕ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. (KANNADA PRABHA)