X Close
X

ಉತ್ತರ ಪ್ರದೇಶ : ಗುಂಡಿಟ್ಟು ದಲಿತ ವೈದ್ಯಕೀಯ ವಿದ್ಯಾರ್ಥಿ ಹತ್ಯೆ


shot
ಮುಜಾಫರ್ ನಗರ : ಉತ್ತರ ಪ್ರದೇಶ ರಾಜ್ಯದ ಮುಜಾಫರ್ ನಗರ ಜಿಲ್ಲೆಯ ಮಂಡ್ಲ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ದಲಿತ ವೈದ್ಯಕೀಯ ವಿದ್ಯಾರ್ಥಿ ಮೇಲೆ ಗುಂಡು ಹಾರಿ ಹತ್ಯೆ ಮಾಡಿದ್ದಾರೆ.

ರಜತ್ ಹತ್ಯೆಗೊಳಗಾದ ಯುವಕ . ಈತ ಕಾಲೇಜ್ ಮುಗಿಸಿ ನಿನ್ನೆ ಸಂಜೆ ಮನೆಗೆ ವಾಪಾಸ್ ಆಗುತ್ತದ್ದಾಗ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ವೃತ್ತ ಅಧಿಕಾರಿ ರಿಜ್ವಾನ್ ಅಹ್ಮದ್ ತಿಳಿಸಿದ್ದಾರೆ.

ರಜತ್ ದ್ವಿತೀಯ ವರ್ಷದ ವೈದ್ಯಕೀಯ ಕೋರ್ಸ್ ಮಾಡುತ್ತಿದ್ದ ಎನ್ನಲಾಗಿದೆ. ದುಷ್ಕರ್ಮಿಗಳು ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಅವರ ಕುಟುಂಬ ಸದಸ್ಯರು ಮೃತದೇಹವನ್ನು ರಸ್ತೆಯಲ್ಲಿ ಇಟ್ಟು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಕುಟುಂಬ ಸದಸ್ಯರ ಮನವೊಲಿಸಿ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅಪರಿಚಿತ ದುಷ್ಕರ್ಮಿಗಳು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ರಿಜ್ವಾನ್ ಅಹ್ಮದ್ ತಿಳಿಸಿದ್ದಾರೆ. (KANNADA PRABHA)